ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ. 'ಪೀಲಿಂಗ್ಸ್' ಎಂದು ಶುರುವಾಗುವ ಡ್ಯಾನ್ಸಿಂಗ್ ನಂಬರ್ 5 ಭಾಷೆಗಳಲ್ಲಿ ಸದ್ದು ಮಾಡ್ತಿದೆ. ಬಿಂದಾಸ್ ಸಾಂಗ್‌ಗೆ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ 'ಪುಷ್ಪ'-2 ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಾಗಿರುವುದರಿಂದ ಬುಕ್ಕಿಂಗ್ ಕೊಂಚ ಕಮ್ಮಿ ಆಗಿದೆ. ಇನ್ನು ಕೊನೆ ಹಂತದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದೇ ಹಾದಿಯಲ್ಲಿ 'ಪೀಲಿಂಗ್ಸ್' ಸಾಂಗ್ ರಿಲೀಸ್ ಮಾಡಿದ್ದಾರೆ.